Sunday, March 4, 2018

ಶರಣಸಿರಿ

*ಶರಣಸಿರಿ,ಸಿಂಧನೂರು,ಬಸವಕೇಂದ್ರಹಾಗೂ ಶರಣೇಗೌಡರು*

ಸಿಂಧನೂರು ಬಸವ ಕೇಂದ್ರದ ಹಿರಿಯರು,ನನ್ನ ಹತ್ತಿರದ ಬಂಧುಗಳೂ ಆದ ಕಾಕಾ ಚಿಂತಮಾನದೊಡ್ಡಿಯ ಶರಣೇಗೌಡ ಮಾಲಿಪಾಟೀಲ ಅವರು ಅಪ್ಪಟ ಅಲ್ಲಲ್ಲಾ *ಉಗ್ರ ಬಸವಾಭಿಮನಿ* ನನ್ನನ್ನು ಬಾಲ್ಯದಿಂದ ಬಲ್ಲವರು.

ನೂರಾರು ಉಪನ್ಯಾಸಗಳ ಮೂಲಕ ನನ್ನನ್ನು ಜನಮಾನಸದಲ್ಲಿ ಸ್ಥಾಯಿಯಾಗಿಸಿದವರು.

ಎಪ್ಪತ್ತರ ದಶಕದಲ್ಲಿ ಕಾನೂನು ವ್ಯಾಸಂಗ ಪೂರೈಸಿದರೂ ಕೃಷಿ ಕಾಯಕದಲ್ಲಿ ನಿರತರಾದವರು.

ಮಾತಾಜಿ ಹಾಗೂ ಲಿಂಗಾನಂದರ ಪ್ರಭಾವದಿಂದ ಬಸವಧರ್ಮದಲ್ಲಿ ಪ್ರಭಾವಿತರಾದರು.

ಸಿಂಧನೂರಿನ ಶರಣಸಿರಿಯ ಪ್ರತಿ ಭೇಟಿಯಲ್ಲೂ ನನ್ನೊಡನೇ ತಾತ್ವಕ ಜಗಳ ಇದ್ದೇ ಇರುತ್ತದೆ.
ಅದೂ ಬಸವಧರ್ಮದ ಸುತ್ತ.

ಇತ್ತೀಚೆಗೆ ಪುಸ್ತಕ ಪ್ರಾಧಿಕಾರ ಪ್ರಕಟಿಸಿದ ಸಮಗ್ರ ವಚನ ಸಂಪುಟದ ನೂತನ ಪ್ರತಿಗಳನ್ನು ನೀಡಿದರು.
೨೦೧೬ ರಲ್ಲಿ ಪುಸ್ತಕ ಪ್ರಾಧಿಕಾರದ ಬಂಜೆಗೆರೆ ಜಯಪ್ರಕಾಶ ತಂಡ ಅಭಿನಂದನೀಯ ಕೆಲಸ ಮಾಡಿದೆ.

ನನಗಂತೂ ಇನ್ನಿಲ್ಲದ ಸಂಭ್ರಮ. ಎರಡೇ ಸಂಪುಟಗಳಲ್ಲಿ ಸಮಗ್ರ ವಚನಗಳು!

ಈಗ ಹೊಸ ಹುಮ್ಮಸ್ಸು ವಚನ ವಿಶ್ಲೇಷಣೆ ಬರೆಯಲು.

ನಿತ್ಯ ಪಠಿಸಲು ಅನುಕೂಲವಾಗುವ ಈ ಸಂಪುಟಗಳನ್ನು ಕಾಪಿಟ್ಟುಕೊಳ್ಳುವೆ.

---ಸಿದ್ದು ಯಾಪಲಪರವಿ.

No comments:

Post a Comment