Wednesday, May 21, 2014

GOD PRESENTED US HUMAN BEINGS IN A PACKAGE.
WE HAVE TO ACCEPT ALL WITHOUT HESITATION.
NEITHER THROW NOR REJECT,AS THEY MAY BE USEFUL SOME TIME .

ಜಿಎಸ್ಎಸ್

ಕವಿಗಳಿಗೆ ಸಾವೆಂಬುದಿಲ್ಲ
ವಯೋಮಾನಕೆ ಅನುಗುಣವಾಗಿ
ದೈಹಿಕವಾಗಿ ಅಗಲಿದರೂ
ತಮ್ಮ ಕಾವ್ಯದ ಮೂಲಕ 
ಸದಾ ನಮ್ಮೊಂದಿಗಿರುತ್ತಾರೆ
ಜಿಎಸ್ಎಸ್ ಎದೆ 
ತುಂಬಿ ಹಾಡುವವರ 
ಕಂಠಸಿರಿಯಲಿ ಶಾಶ್ವತ 
ನೆಲೆಸಿದ್ದಾರೆ

ಹೆಣ್ಣು


ಹೆಣ್ಣು ಎಂದರೆ ಅವ್ವ
ಹೆಣ್ಣು ಎಂದರೆ ಅಕ್ಕ
ಹೆಣ್ಣು ಎಂದರೆ ಗೆಳತಿ
ಹೆಣ್ಣು ಎಂದರೆ ಹೆಂಡತಿ
ಹೆಣ್ಣು ಎಂದರೆ ಮಗಳು
ಹೆಣ್ಣು ಎಂದರೆ ಪ್ರೀತಿ
ಹೆಣ್ಣು ಎಂದರೆ ಮಮತೆ
ಹೆಣ್ಣು ಎಂದರೆ ಉನ್ಮಾದ
ಹೆಣ್ಣು ಎಂದರೆ ಉತ್ಸಾಹ
ಹೆಣ್ಣು ಎಂದರೆ ಎಲ್ಲ 
ಏನಿಲ್ಲ ಎಂಬಂತಿಲ್ಲ
ಎಲ್ಲವೂ ಇರುವ
ಜೀವ ಸೆಲೆ-ನೆಲೆ

ಸಾರ್ವಜನಿಕ ಬದುಕು

ಸಾರ್ವಜನಿಕ ಬದುಕು ಎಂದರೆ ಬರೀ ಸುಳ್ಳು ನಯವಂಚನೆ ಹಿಪೂಕ್ರಸಿ ಎನ್ನುವಂತೆ ಆಗಿದೆ.
ಸತ್ಯ ಸ್ನೇಹ ಪ್ರೀತಿ ಯಾವುದು ಬೇಡ ಸದ್ಯ ತಪ್ಪಿಸಿಕೊಂಡರೆ ಸಾಕೆಂಬ ಇರಾದೆ

ವಿಶ್ವಾಸ ಮುದಗಲ್ ಅವರೊಂದಿಗೆ

ಇಂದು ತುಂಬಾ ಖುಷಿ ಆಗಿದೆ ಯಾಕೆಂದರೆ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿಕೊಂಡ ಇಂಗ್ಲಿಷ್ ಕಾದಂಬರಿಕಾರ ಗದಗ ಮೂಲದ ವಿಶ್ವಾಸ ಮುದಗಲ್ ರನ್ನು ಗದುಗಿನ ಜನರಿಗೆ ಪರಿಚಯ ಮಾಡಿದೆ ಎಂಬ ಕಾರಣಕ್ಕೆ .

ಬರಹ

ಬರಹಕ್ಕೆ ಬದುಕಿಸುವ ಶಕ್ತಿ ಇದೆ

ಬದುಕಿನ ಪಾಠ

ಹೊಸ ಆಲೋಚನೆಗಳು 
ಹೊಸ ಸವಾಲುಗಳು 
ಎಡವಿ ಬಿದ್ದು ಎಡವಟ್ಟು ಗಳು
ಕಲಿಸಿದ ಪಾಠಗಳು
ಮೈಮೇಲಿನ ಆರದ ಗಾಯಗಳು ಎದುರಿಗಿರುವ ಅನೇಕ ಅವಕಾಶಗಳು 
ತೆವಳಿಕೊಂಡು ದಡ 
ಸೇರುವ ಹಂಬಲವ
ಹುಟ್ಟಿಸಿವೆ.........