Friday, February 12, 2010




ಜಗದ್ಗುರು ತೋಂಟದಾಯð ಮಠ - ಕನ್ನಡದ ಜಗದ್ಗುರುಗಳು
ಗದುಗಿನ ಜಗದ್ಗುರು ತೋಂಟದಾಯ ಮಠದ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು 'ಕನ್ನಡದ ಜಗದ್ಗುರುಗಳು' ಎಂದೇ ಗೌರವಿಸಲ್ಪಟ್ಟಿದ್ದಾರೆ.
1974 ರಲ್ಲಿ ಗದುಗಿನ ತೋಂಟದಾಯðಮಠದ ಪೀಠಾಧ್ಯಕ್ಷರಾಗಿರುವ ಶ್ರೀಗಳದು ಸದಾ ಕನ್ನಡಪರ ನಿಲುವು. ಶ್ರೀಮಠದ ಪ್ರತಿ ಸೋಮವಾರದ ಶಿವಾನುಭವಗಳ ಮೂಲಕ ಕನ್ನಡದ ಕಂಪನ್ನು ಪಸರಿಸುತ್ತಾರೆ.
ಕನ್ನಡ ಸಾರಸ್ವತ ಲೋಕದ ದಿಗ್ಗಜರೆಲ್ಲ ತೋಂಟದಾಯð ಮಠದ ಶಿವಾನುಭವ ಕಾಯðಕ್ರಮದಲ್ಲಿ ಪಾಲ್ಗೊಂಡಿದ್ದಾರೆ.ಅವರ ದಿವ್ಯ ಸಾನಿಧ್ಯದಲ್ಲಿ ಅಖಿಲಭಾರತ 76ನೇ ಸಾಹಿತ್ಯ ಸಮ್ಮೇಳನ ಉದ್ಘಾಟನೆಯಾಗುತ್ತಿರುವುದು ಅಭಿಮಾನದ ಸಂಗತಿ.
ಪರಮಪೂಜ್ಯ ತೋಂಡದಾಯð ಡಾ. ಸಿದ್ಧಲಿಂಗ ಸ್ವಾಮಿಗಳು. ತಮ್ಮ ಶ್ರೀಮಠದ ಲಿಂಗಾಯತ ಅಧ್ಯಯನ ಸಂಸ್ಥೆಯ ಮೂಲಕ ಸಾವಿರಾರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.ಗೋಕಾಕ ಚಳುವಳಿಯಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಗೋಕಾಕ ಚಳುವಳಿಗೆ ಅಥðಪೂಣð ಚಾಲನೆ ನೀಡಿದರು.
ಇಡೀ ದೇಶದಾದ್ಯಂತ ಸಂಚರಿಸಿ ಪೂಜ್ಯರು ಹತ್ತು ಸಾವಿರಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿದ್ದಾರೆ. ಶ್ರೀಗಳ ಅಸ್ಖಲಿತ ವಾಣಿ, ಪ್ರಖರ ವಿಚಾರಧಾರೆ, ಅದನ್ನು ಪ್ರತಿಪಾದಿಸುವ ಕ್ರಮ ಅನನ್ಯವಾದದು. ಶ್ರೀಗಳ ಭಾಷಣಕ್ಕೆ ಸಾವಿರಾರು ಜನರನ್ನು ಸೇರಿಸುವ ಚುಂಬಕ ಶಕ್ತಿ ಇದೆ.
ಅವರ ಎತ್ತರದ ನಿಲುವು, ಆಕಷðಕ ಕಂಚಿನ ಕಂಠ, ಪಾರದಷðಕ ಮನಸ್ಥಿತಿ, ಮಾತೃ ಹೃದಯ ಶ್ರೀಗಳನ್ನು ಸಾಮಾನ್ಯರ ಸ್ವಾಮಿಗಳೆಂದೇ ಗೌರವಿಸಿದೆ. ಶ್ರೀಗಳ ಪುಸ್ತಕ ಪ್ರೇಮ ಅನುರೂಪವಾದದು.
ಅಪ್ರಕಟಿತ ಸಾಹಿತ್ಯ, ಅನುವಾದ ಸಾಹಿತ್ಯ, ಗ್ರಾಮೀಣ ಗ್ರಂಥಮಾಲೆ, ನೂತನ ಸಾಹಿತ್ಯ ರತ್ನ, ಪುಣ್ಯಪುರುಷರ ಮಾಲಿಕೆ, ಅಭಿನಂದನಾ ಗ್ರಂಥ, ಹಾಗೂ ಮಹಾ ಪ್ರಬಂಧಗಳ ಮಾಲಿಕೆಯಲ್ಲಿ ಒಟ್ಟು 450 ಗ್ರಂಥಗಳನ್ನು ಪ್ರಕಟಿಸಿದ್ದಾರೆ.

No comments:

Post a Comment